/newsfirstlive-kannada/media/post_attachments/wp-content/uploads/2024/07/Suchitra-Krishnamurthy.jpg)
ಇತ್ತೀಚೆಗೆ ಜರ್ಮನಿಯ ಬರ್ಲಿನ್ನಲ್ಲಿ ‘ಬೆತ್ತಲೆ ಪಾರ್ಟಿ’ ನಡೆದಿತ್ತು. ಈ ಪಾರ್ಟಿಗೆ ಅನೇಕ ತಾರೆಯರು ಸದ್ದಿಲ್ಲದಂತೆ ಭಾಗವಹಿಸುತ್ತಿರುತ್ತಾರೆ. ಅದರಂತೆಯೇ ಕನ್ನಡದ ‘ವಿಶ್ವ’ ಸಿನಿಮಾದಲ್ಲಿ ನಟಿಸಿದ್ದ ನಟಿ ಸುಚಿತ್ರಾ ಕೃಷ್ಣಮೂರ್ತಿಯವರು ಈ ಪಾರ್ಟಿಯಲ್ಲಿ ಭಾಗವಹಿಸಿದ್ದು, ಈ ಕುರಿತಾಗಿ ಮನಬಿಚ್ಚಿ ಮಾತನಾಡಿದ್ದಾರೆ.
ಖಾಸಗಿ ವೆಬ್ಸೈಟ್ಗೆ ನೀಡಿದ ಸಂದರ್ಶನದಲ್ಲಿ ಬೆತ್ತಲೆ ಪಾರ್ಟಿಯ ಬಗ್ಗೆ ಸುಚಿತ್ರಾ ಕೃಷ್ಣಮೂರ್ತಿಯವರು ಮಾತನಾಡಿದ್ದು, ‘‘ನನಗೆ ಭಯಾನಕ ಅನುಭವವಾಗಿದೆ. ನಾನು ಅದನ್ನು ಎಂಜಾಯ್ ಮಾಡಲಿಲ್ಲ’’ ಎಂದು ಹೇಳಿದ್ದಾರೆ.
Just attended a body positivity/ naked party in Berlin.
Reminded me of the quote : dont be so open minded that ur brains fall out.
Desi girl forever. Need a sĥower & some gayatri mantra chanting . Baapre ?
— Suchitra Krishnamoorthi (@suchitrak)
Just attended a body positivity/ naked party in Berlin.
Reminded me of the quote : dont be so open minded that ur brains fall out.
Desi girl forever. Need a sĥower & some gayatri mantra chanting . Baapre 🙃— Suchitra Krishnamoorthi (@suchitrak) July 13, 2024
">July 13, 2024
ಟ್ವಿಟ್ಟರ್ನಲ್ಲೂ ಈ ಕುರಿತಾಗಿ ಮಾಹಿತಿ ಹಂಚಿಕೊಂಡಿರುವ ನಟಿ ‘‘ ನಾನು ಬರ್ಲಿನ್ನಲ್ಲಿ ನಡೆದ ಬೆತ್ತಲೆ ಪಾರ್ಟಿಯಲ್ಲಿ ಭಾಗವಹಿಸಿದ್ದೆ. ಆ ಪಾರ್ಟಿಗೆ ಹೋದ ಬಳಿಕ ನನಗೊಂದು ಸಂದೇಶ ನೆನಪಾಯ್ತು. ಅದೇನೆಂದರೆ ನಿಮ್ಮ ಮೆದುಳು ಬಿದ್ದೋಗುವಷ್ಟು ಮುಕ್ತವಾಗಿ ಇರಬೇಡಿ. ನಾನು ಎಂದೆಂದಿಗೂ ದೇಸಿ ಹುಡುಗಿ. ನನಗೆ ಸ್ನಾನ ಮತ್ತು ಗಾಯತ್ರಿ ಪಠಣ ಮಾಡುವ ಅಗತ್ಯವಿದೆ’’ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಅಮ್ಮಾ..ಅಪ್ಪ.. ಅಯ್ಯೋ.. ಗುಡ್ಡ ಕುಸಿದು ಒಂದೇ ಕುಟುಂಬದ ಐವರು ನಾಪತ್ತೆ.. ಭಯಾನಕ ದೃಶ್ಯ ಇಲ್ಲಿದೆ
ಸದ್ಯ ನಟಿಯ ಟ್ವೀಟ್ ವೈರಲ್ ಆಗಿದೆ. ಅನೇಕರು ಈ ಬಗ್ಗೆ ಕಾಮೆಂಟ್ ಮಾಡಿದ್ದಾರೆ. 214 ಜನರು ಟ್ವೀಟನ್ನು ರಿಪೋಸ್ಟ್ ಮಾಡಿದ್ದಾರೆ. 3,302 ಜನರು ಲೈಕ್ಸ್ ಮತ್ತು 639 ಜನರು ಬುಕ್ ಮಾರ್ಕ್ ಮಾಡಿದ್ದಾರೆ.
ಇದನ್ನೂ ಓದಿ: KSRTC ಬಸ್ ಗುದ್ದಿದ ರಭಸಕ್ಕೆ ಸಂಪೂರ್ಣ ಜಖಂಗೊಂಡ ಕಾರು.. ಕಾರಿನಲ್ಲಿದ್ದವರ ಪರಿಸ್ಥಿತಿ?
ಅಂದಹಾಗೆಯೇ ನಟಿ ಸುಚಿತ್ರಾ ಕೃಷ್ಣಮೂರ್ತಿಯವರು ಬಾಂಬೆ ಮೂಲದವರಾಗಿದ್ದು, ಶಿವರಾಜ್ ಕುಮಾರ್ ನಟನೆಯ 1999ರಲ್ಲಿ ತೆರೆಕಂಡ ‘ವಿಶ್ವ’ ಸಿನಿಮಾದಲ್ಲಿ ಇವರು ನಟಿಸಿದ್ದರು. ಸುರೇಂದ್ರ ನಾಥ್ ಮತ್ತು ಆರ್ ರಾಜಶೇಖರ್ ಚಿತ್ರಕತೆ-ಸಂಭಾಷಣೆ ಬರೆದಿದ್ದರು. ಶಿವಮಣಿ ನಿರ್ದೇಶಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ